Saturday, June 24, 2017

DVG DCR ON 24-06-2017

ದಿ:24-06-2017 ರಂದು ದಾವಣಗೆರೆ ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ವಿವರ.

ಹರಿಹರ (ಗ್ರಾ) ಪೊಲೀಸ್ ಠಾಣೆ ಗುನ್ನೆ ನಂ: 132/2017, ಕಲಂ: 279.337.304(ಎ) ಐ.ಪಿ.ಸಿ.

ದಿ:-24-06-17 ರಂದು ಬೆಳಿಗ್ಗೆ 09-00 ಗಂಟೆಗೆ ಪಿರ್ಯಾದಿ ಹೆಚ್ ಎಂ ಷಡಾಕ್ಷರಯ್ಯ ಬಿನ್ ಬಸವರಾಜಯ್ಯ, 54ವರ್ಷ, ಗಂಗನರಸಿ ಗ್ರಾಮ ಹರಿಹರ ತಾಲ್ಲೂಕು  ರವರು ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ ದೂರಿನ ಸಾರಾಂಶ, ದಿ:-24-06-2017 ರಂದು ಬೆಳಿಗ್ಗೆ 07-45 ಗಂಟೆಗೆ ಪಿರ್ಯಾದಿಯ ಕಿರಿಯ ತಮ್ಮನಾದ ರೇವಣಸಿದ್ದಪ್ಪನು ಎಂದಿನಂತೆ ಶಾಲೆಗೆ ಹೋಗಲು ತನ್ನ ಬಾಬ್ತು ಕೆಎ-17/ಇಬಿ-8702 ನೇ ಬೈಕಿನಲ್ಲಿ ತನ್ನ ಮಗನಾದ ಹೇಮಂತ್ ನನ್ನು ಹಿಂದುಗಡೆ ಕೂರಿಸಿಕೊಂಡು ಶಾಲೆಗೆ ಹೋಗಲು ಹರಿಹರದ ಕಡೆಗೆ ಬರುತ್ತಿರುವಾಗ ಹರಿಹರ-ಶಿವಮೊಗ್ಗ ರಸ್ತೆಯ ಗುತ್ತೂರು ಬಸ್ ನಿಲ್ದಾಣದ ಬಳಿ ರಸ್ತೆಯ ಎಡಬಾಗದಲ್ಲಿ ಬರುತ್ತಿರುವಾಗ ಪಕ್ಕದಲ್ಲಿ ಒಂದು ಲಾರಿಯ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಚಾನಲ್  ರಸ್ತೆಗೆ ಎಡಬಾಗಕ್ಕೆ ತಿರುಗಿಸಿದಾಗ ಲಾರಿಯ ಮುಂದಿನ ಎಡಚಕ್ರ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಪಿರ್ಯಾದಿಯ ತಮ್ಮನಾದ  ರೇವಣಸಿದ್ದಪ್ಪನು ಕೆಳಗೆ ಬಿದ್ದು ಎದೆಯ ಬಲಭಾಗಕ್ಕೆ, ಬಲಪಕ್ಕೆಗೆ ತೀವ್ರ ರೀತಿಯಲ್ಲಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಹಿಂಬದಿಯಲ್ಲಿ ಕುಳಿತಿದ್ದ ಹೇಮಂತ್ ನಿಗೆ ಸಣ್ಣಪುಟ್ಟ ಪೆಟ್ಟಾಗಿರುತ್ತೆ, ಅಪಘಾತಪಡಿಸಿದ ಲಾರಿ ನಂಬರ್ ನೋಡಲಾಗಿ ಕೆಎ-34-8767 ಆಗಿದ್ದು ಲಾರಿ ಚಾಲಕನ ಹೆಸರು ರಮೇಶ ಎಂದು ತಿಳಿಯಿತು. ಶವವನ್ನು ಹರಿಹರ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿಟ್ಟಿರುತ್ತೆ ಈ ಅಪಘಾತಪಡಿಸಿದ ಕೆಎ-34-8767 ನೇ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಬಡಾವಣೆ ಪೊಲೀಸ್ ಠಾಣೆ ಗುನ್ನೆ ನಂ: 170/2017, ಕಲಂ: 379 ಐ.ಪಿ.ಸಿ.

ಪಿರ್ಯಾದಿ ದಿ:23/06/217 ರಂದು 19:00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:13/05/2016 ರಂದು ನನ್ನ ಕೆಲಸ ಮುಗಿಸಿಕೊಂಡು ರಾತ್ರಿ 10:00 ಪಿ.ಎಂ. ಗಂಟೆಗೆ ನಮ್ಮ ಮನೆಗೆ ವಾಪಾಸಾಗಿ ನಮ್ಮ ಮನೆಯ ಮುಂದೆ ನನ್ನ ಬಾಬ್ತು KA27-S-7898 ನೇ ಬಜಾಜ್ ಪಲ್ಸರ್ ಮೋ/ಸೈ ನ್ನು ನಿಲ್ಲಿಸಿದ್ದು ದಿ:14/05/2016 ರಂದು ಬೆಳಿಗ್ಗೆ 08:00 ಗಂಟೆಗೆ ನಾನು ನನ್ನ ಪಲ್ಸರ್ ಮೋ/ಸೈ ನಿಲ್ಲಿಸಿದ ಸ್ಥಳದಲ್ಲಿ ನೋಡಿಕೊಳ್ಳಲಾಗಿ ನನ್ನ ಮೋ/ಸೈ ಕಾಣಿಸದೇ ಇದ್ದು ಅಕ್ಕಪಕ್ಕ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ. ಸದರಿ ನನ್ನ KA27-S-7898 ನೇ ಬಜಾಜ್ ಪಲ್ಸರ್ ಮೋ/ಸೈಗೆ ವಿಮೆ ಮಾಡಿಸದೇ ಇದ್ದುದರಿಂದ ನಾನು ದಾವಣಗೆರೆ ನಗರದ ಹೊರವಲಯ ರೈಲ್ವೇ ನಿಲ್ದಾಣ,  ಬಸ್ ನಿಲ್ದಾಣ, ಬಜಾರ್ ಹಾಗು ಮಾಲ್ ಗಳ ಬಳಿ ಹೋಗಿ ಸದರಿ ಬೈಕನ್ನು ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ.ನಂತರ ಹರಿಹರ, ಹರಪನಹಳ್ಳಿ, ಚಿತ್ರದುರ್ಗ, ಶಿವಮೊಗ್ಗ, ಚನ್ನಗಿರಿ, ರಾಣೇಬೆನ್ನೂರು, ಸುತ್ತ ಮುತ್ತ ಈವರೆಗೆ ವಿಚಾರಿಸಲಾಗಿ ನನ್ನ ಮೋ/ಸೈ ಸಿಕ್ಕಿರುವುದಿಲ್ಲ. ನಾನು ನನ್ನ ಮೋ/ಸೈಗೆ ವಿಮೆ ಇರದೇ ಇದ್ದುದರಿಂದ ಹಾಗು ನಾನು ನನ್ನ ದಿನನಿತ್ಯದ ಕೆಲಸದಲ್ಲಿ ಮಗ್ನನಾಗಿದ್ದುದರಿಂದ ಈವರೆಗೆ ಠಾಣೆಗೆ ಬಂದು ಯಾವುದೇ ದೂರು ನೀಡಿರುವುದಿಲ್ಲ ಸದರಿ ನನ್ನ ಬಾಬ್ತು KA27-S-7898 ನೇ ಬಜಾಜ್ ಪಲ್ಸರ್ ಮೋ/ಸೈ ನ್ನು ಯಾರೋ ಕಳ್ಳರು ದಿ:13/05/2016 ರಂದು ರಾತ್ರಿ 10:00 ಪಿ.ಎಂ. ಗಂಟೆಯಿಂದ ದಿ:14/05/2016 ರಂದು ಬೆಳಿಗ್ಗೆ 08:00 ಎ.ಎಂ. ಗಂಟೆ ಮಧ್ಯದ ಅವಧಿಯಲ್ಲಿ ದಾವಣಗೆರೆ ನಗರದ ವಿನೋಭ ನಗರ 3ನೇ ಮೇನ್, 1ನೇ ಕ್ರಾಸ್, ಪಾರ್ಕ್ ಹತ್ತಿರ ನಮ್ಮ ವಾಸದ ಮನೆಯ ಮುಂಭಾಗ ಲಾಕ್ ಮಾಡಿ ನಿಲ್ಲಿಸಿದ್ದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಅದರ ಚಾಸ್ಸಿನಂ MD2DHDHZZSCL18409 ಇಂಜಿನ್ ನಂ DHGBSL06397 ಹಾಗು 2010 ನೇ ಸಾಲಿನ ಮಾಡೆಲ್ ಆಗಿದ್ದು ಅಂದಾಜು ಮೌಲ್ಯ ರೂ 49000/-  ಆಗಿರುತ್ತದೆ. ಮೋ/ಸೈ ನ್ನು ಪತ್ತೆ ಮಾಡಿಕೊಡಲು ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಕೆ.ಟಿ.ಜೆ ನಗರ ಪೊಲೀಸ್ ಠಾಣೆ ಗುನ್ನೆ ನಂ: 105/2017, ಕಲಂ: 380.457 ಐ.ಪಿ.ಸಿ.

ದಿನಾಂಕ 23.06.17ರಂದು  ಮಧ್ಯಾಹ್ನ 13.00 ಗಂಟೆಗೆ ಪಿರ್ಯಾದುದಾರರಾದ ಬಸವರಾಜ ಬಿನ್ ಮೂರು ಜಾವಪ್ಪ, 32 ವರ್ಷ, ಶ್ರೀರಾಂ ಫೈನಾನ್ಸ್ ನಲ್ಲಿ ಶಾಖಾಧಿಕಾರಿ, ವಾಸ ದಾವಣಗೆರೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ಎಂದಿನಂತೆ ತಮ್ಮ ಶಾಖೆಯ ಕೆಲಸ ಮುಗಿಸಿಕೊಂಡು ರಾತ್ರಿ 8.00 ಗಂಟೆಗೆ ಶ್ರೀರಾಂ ಕಛೇರಿಯ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ 23.06.17 ರಂದು ಬೆಳಿಗ್ಗೆ 7.45 ಗಂಟೆಗೆ ಶ್ರೀರಾಂ ಕಂಪನಿಯ ಕ್ರೆಡೇಟ್ ಮ್ಯಾನೇಜರ್ ಆದ ಶ್ರೀ. ಆನಂದ ಇವರು ಕೆಲಸ ನಿರ್ವಹಿಸಲು ಶಾಖೆಯ ಬಾಗಿಲು ತೆಗೆಯಲು ಹೋಗಿದ್ದು, ಸದರಿ ಕಛೇರಿ ಬೀಗ ಮುರಿದಿದ್ದು ಕಂಡು ಬಂದಿದ್ದು, 2ನೇ ಮಹಡಿಯಲ್ಲಿರುವ ಸರ್ಟರ್ಸ್ ನ್ನು ಗ್ಯಾಸ್ ಕಟರ್ ನಿಂದ ಬೀಗ ಮುರಿದ್ದು, ಒಳಗೆ ಹೋಗಿ ನೋಡಿದಾಗ ಕಛೇರಿಯಲ್ಲಿರುವ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕಂಡು ಬಂದಿದ್ದು, ನಂತರ ಫೋನ್ ಮುಖಾಂತರ ಮ್ಯಾನೇಜರ್ ಆನಂದ ರವರು ಈ ವಿಚಾರವನ್ನು ಪಿರ್ಯಾದುದಾರರಿಗೆ ತಿಳಿಸಿದ್ದು,ನಂತರ ಪಿರ್ಯಾದುದಾರರು ಬಂದು ನೋಡಿದಾಗ ಸದರಿ ಕಛೇರಿಯಲ್ಲಿರುವ ಹೆಚ್.ಪಿ. ಕಂಪನಿಯ 7 ಮಾನಿಟರ್ ಗಳು, ಎಸೆರ್ ಕಂಪನಿಯ 1 ಮಾನಿಟರ್, ಹೆಚ್.ಸಿ.ಎಲ್. ಕಂಪನಿಯ 1 ಮಾನಿಟರ್, ಡೆಲ್ ಕಂಪನಿಯ 1 ಮಾನಿಟರ್,  ಹೆಚ್.ಪಿ ಕಂಪನಿಯ 6 ಸಿಪಿಯು ಗಳು. ಒಟ್ಟು ಮೌಲ್ಯ 2,11,500/- ರೂಗಳು ಆಗಿದ್ದು, ಕಳುವಾಗಿರುವ ಮೇಲ್ಕಂಡ ಕಂಪ್ಯೂಟರ್ ಬಿಡಿ ಭಾಗಳು ಪತ್ತೆ ಮಾಡಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ  ಅಂತ ನೀಡಿದ ಲಿಖಿತ ದೂರಿನ ಮೇರೆಗೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ದಾವಣಗೆರೆ ಡಿ.ಸಿ.ಬಿ ಪೊಲೀಸ್ ಠಾಣೆ ಗುನ್ನೆ ನಂ: 57/2017, ಕಲಂ: 32 (3) ಕೆ.ಇ.ಆಕ್ಟ.

ದಿನಾಂಕ 23-06-2017  ಮಧ್ಯಾಹ್ನ 01-30 ಪಿಎಂಗೆ  ಸಿಹೆಚ್ ಸಿ- 87 ಶಿವಪ್ರಕಾಶ ಇವರು ನೀಡಿದ ದೂರನ್ನು ಸ್ವೀಕರಿಸಿ ನೋಡಲಾಗಿ ಪಿರ್ಯಾದಿ ಮತ್ತು ಪಿಸಿ 02 ಮಂಜುನಾಥ  ಇವರೊಂದಿಗೆ ಬೆಳಿಗ್ಗೆ 10-30 ಗಂಟೆಗೆ ಭರತ್ ಕಾಲೋನಿ ಕಡೆ  ಗಸ್ತು ಮಾಡುತ್ತಿರುವಾಗ. ಬಸಾಪುರ ಗ್ರಾಮದ ಕುಮಾರ.ಟಿ ಎಂಬುವರು ಬೀಡಿ ಅಂಗಡಿಯ ಮುಂಭಾಗ ಕುಮಾರ. ಎಂಬುವರು ಸಾರ್ವಜನಿಕರಿಗೆ  ಅಕ್ರಮವಾಗಿ ಮಧ್ಯ ಸೇವನೆಗೆ ಅವಕಾಶ ಮಾಡಿ ಕೊಟ್ಟಿರುತ್ತಾರೆ. ಅಂತಾ ಬಂದ ಮಾಹಿತಿ ಮೇರೆಗೆ ಪಂಚರುರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಅಕ್ರಮವಾಗಿ ಮಧ್ಯ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದ ಆರೋಪಿಯಾದ ಕುಮಾರ.ಟಿ ಬಿನ್ ಮಿಲ್ಲಿನ ತಿಪ್ಪಯ್ಯ ಇವರ ಅಂಗಡಿಯ ಮುಂಭಾಗ  ದಾಳಿ ಮಾಡಿ ಪಂಚರ ಸಮಕ್ಷಮ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 90 .ಎಂ.ಎಲ್. ಬೆಂಗಳೂರು ಮಾಲ್ಟ್ ವಿಸ್ಕಿ ಕಂಪನಿಯ 22 ಮದ್ಯದ ಪೌಚ್ ಗಳು, 04 ಖಾಲಿ  ಪೌಚ್ 03 ಖಾಲಿ ಪ್ಲಾಸ್ಟಿಕ್ ಲೋಟಗಳು ಇವುಗಳ ಒಟ್ಟು ಬೆಲೆ 528/- ರೂ ಗಳಾಗಿದ್ದು  ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮಾಡಿ  ಅಮಾನತ್ತು ಪಡಿಸಿಕೊಂಡಿರುತ್ತೆ. ಮೇಲ್ಕಂಡ ಆರೋಪಿಯ ವಿರುದ್ದ ಪ್ರಕರಣ ದಾಖಲಿಸುವಂತೆ ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಜಗಳೂರು ಪೊಲೀಸ್ ಠಾಣೆ ಗುನ್ನೆ ನಂ: 150/2017, ಕಲಂ: 21, 4(1), 4(1ಎ) ಎಂ.ಎಂ.ಆರ್.ಡಿ ಕಾಯ್ದೇ ಮತ್ತು 379 ಐ.ಪಿ.ಸಿ.


ದಿನಾಂಕ:-23.06.2017 ರಂದು 10.00 ಎ.ಎಂ. ಸಮಯದಲ್ಲಿ ಜಗಳೂರು ಪೊಲೀಸ್ ಠಾಣೆಯಲ್ಲಿರುವಾಗ್ಗೆ ಸದರಿಯವರಿಗೆ ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಸಂಗೇನಹಳ್ಳಿ ಗ್ರಾಮದ ಹತ್ತಿರವಿರುವ ಸರ್ಕಾರಿ ಜಿನಿಗಿ ಹಳ್ಳದಲ್ಲಿ ಕಳ್ಳತನದಿಂದ ಮರಳು ತುಂಬುತ್ತಿರುವ ಬಗ್ಗೆ ದೂರವಾಣಿ ಮುಖಾಂತರ ಬಂದ ಖಚಿತ ವರ್ತಮಾನದ ಮೇರೆಗೆ ಸದರಿ ಫಿರ್ಯಾದಿದಾರರು ದಾಳಿ ಮಾಡಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಸಿಬ್ಬಂದಿಯವರಾದ ಸಿ.ಹೆಚ್.ಸಿ-348, 23, ಸಿ.ಪಿ.ಸಿ-300 ಮತ್ತು ಎ.ಪಿ.ಸಿ-245 ರವರೊಂದಿಗೆ ಕೆಎ-17-ಜಿ-365 ನೇ ಇಲಾಖಾ ಜೀಪಿನಲ್ಲಿ ಮೇಲ್ಕಂಡ ಸ್ಥಳಕ್ಕೆ 12.45 ಪಿ.ಎಂ. ಸುಮಾರಿಗೆ ಹೋದಾಗ ಸದರಿ ಜಿನಗಿ ಹಳ್ಳದಲ್ಲಿ KA-35/6503 ನೇ ಲಾರಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬುತ್ತಿದ್ದವರು ಪೊಲೀಸ್ ಜೀಪನ್ನು ಕಂಡು ಸದರಿ ಲಾರಿಯನ್ನು ಹಳ್ಳದಲ್ಲಿಯೇ ಬಿಟ್ಟು ಕೈಗೆ ಸಿಗದಂತೆ ತಪ್ಪಿಸಿಕೊಂಡು ಓಡಿ ಹೋಗಿದ್ದು, ಸದರಿ ಮೇಲ್ಕಂಡ ಲಾರಿಯ ಚಾಲಕ ಮತ್ತು ಮಾಲೀಕರು ಸೇರಿ ಸರ್ಕಾರಿ ಹಳ್ಳದ ಮೂಲ ಸ್ವರೂಪಕ್ಕೆ ಧಕ್ಕೆ ಪಡಿಸಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬುತ್ತಿರುತ್ತಾರೆಂತ ಖಚಿತ ಪಟ್ಟ ಮೇರೆಗೆ ಫಿರ್ಯಾದಿದಾರರು ಸ್ಥಳಕ್ಕೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರ ಸಮಕ್ಷಮ ಸದರಿ ಮರಳು ತುಂಬಿದ್ದ ಮೇಲ್ಕಂಡ ಲಾರಿಯನ್ನು ವಶಕ್ಕೆ ಪಡೆದು (ಲಾರಿಯ ಅಂದಾಜು ಬೆಲೆ ರೂ. 4 ಲಕ್ಷ ಮತ್ತು ಮರಳಿನ ಬೆಲೆ ರೂ. 3000/- ಗಳಾಗಬಹುದು) ಠಾಣೆಗೆ ತೆಗೆದುಕೊಂಡು ಬಂದು ಸದರಿ ಲಾರಿಯ ಚಾಲಕ ಮತ್ತು ಮಾಲೀಕನ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಿ ಅಂತ ನೀಡಿದ ಜ್ಞಾಪನವನ್ನು ಸ್ವೀಕರಿಸಿಕೊಂಡು ಮೇಲ್ಕಂಡಂತೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ. 

Friday, June 23, 2017

DVG DCR ON 23-06-2017

ದಿ:23-06-2017 ರಂದು ದಾವಣಗೆರೆ ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ವಿವರ.

ಬಸವನಗರ ಪೊಲೀಸ್ ಠಾಣೆ ಗುನ್ನೆ ನಂ: 95/2017, ಕಲಂ: 457.380 ಐ.ಪಿ.ಸಿ.

ದಿನಾಂಕ:-22-06-2017 ರಂದು ಬೆಳಿಗ್ಗೆ 10-30 ಎ.ಎಂ ಗಂಟೆಗೆ ಫಿರ್ಯಾದಿ ಎಸ್.ಟಿ ಸತೀಶ್, ಆಂಜನೇಯ ಬಡಾವಣೆ, ದಾವಣಗೆರೆ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ಈಗ್ಗೆ ಸುಮಾರು 08 ತಿಂಗಳ ಹಿಂದೆ ಧರ್ಮಶಾಸ್ರ್ತ ಧರ್ಮಕೂಟ ಟ್ರಸ್ಟ್ ನ್ನು ಪ್ರಾರಂಭಿಸಿರುತ್ತೇವೆ. ಟ್ರಸ್ಟಿಗೆ ಸಂಬಂಧಿಸಿದಂತೆ ಕೆಲಸ ನಿಮಿತ್ತವಾಗಿ ನಮ್ಮ ಹಳೇ ಬೆತೂರು ರಸ್ತೆಯ ಅಕ್ಕ ಶಶಿಕಲಾರವರ ಮನೆಯಲ್ಲಿ ಟ್ರಸ್ಟಿನ ವ್ಯವಹಾರವನ್ನು ನಡೆಸುತ್ತಿರುತ್ತೇವೆ. ಈ ಟ್ರಸ್ಟಿಗೆ ಸಂಬಂಧಿಸಿದಂತೆ ಪದಾಧಿಕಾರಿ ಭಕ್ತಾಧಿಗಳಿಂದ ಹಣ ಸಂಗ್ರಹವಾಗುತ್ತಿದ್ದು ಈ ಹಣದ ಲೆಕ್ಕವನ್ನು ಗಣೇಶರವರು ನೋಡಿಕೊಳ್ಳುತ್ತಿರುತ್ತಾರೆ. ಎಂದಿನಂತೆ ನಿನ್ನೆ ದಿನ ದಿ-21-06-2017 ರ ರಾತ್ರಿ ಸುಮಾರು 10.00 ಗಂಟೆಗೆ ಹಣ ಲೆಕ್ಕ ಮಾಡಿದಾಗ 1,97,690/. (ಒಂದು ಲಕ್ಷದ ತೊಂಬತ್ತೇಳು ಸಾವಿರದ ಆರು ನೂರ ತೊಂಬತ್ತು ರೂ)ರೂ ಹಣವಿದ್ದು ಟೇಬಲ್ ಡ್ರಾ ನಲ್ಲಿ ಇಟ್ಟು ಲಾಕ್ ಮಾಡಿರುತ್ತೇವೆ. ನಂತರ ರೂಮಿನ ಬಾಗಿಲು ಹಾಗೂ ಮುಖ್ಯ ಬಾಗಿಲು ಬೀಗ ಹಾಕಿಕೊಂಡು ಹೋಗಿದ್ದೆವು. ಈ ದಿನ ನಾನು ಮನೆಯಲ್ಲಿದ್ದಾಗ್ಗೆ ಬೆಳಿಗ್ಗೆ ಸುಮಾರು 08.00 ಗಂಟೆಗೆ ಗಣೇಶನು ನಮ್ಮ ಟ್ರಸ್ಟಿನ ಬಾಗಿಲು ಬೀಗ ಮುರಿದಿದೆ. ಹಣದ ಟೇಬಲ್ ಡ್ರಾ ಸಹ ಮುರಿದಿದೆ ಅಂತಾ ವಿಚಾರ ತಿಳಿಸಿದ್ದು ಆ ಕೂಡಲೇ ನಾನು ನಮ್ಮ ಟ್ರಸ್ಟ್ ಕಛೇರಿಗೆ ಬಂದು ನೋಡಿದಾಗ ಯಾರೋ ಕಳ್ಳರು ನಿನ್ನೆ ದಿನ ರಾತ್ರಿ ನಮ್ಮ ಟ್ರಸ್ಟ್ ಮುಂಬಾಗಿಲ ಲಾಕರ್ ಮುರಿದು ಓಳಗಡೆ ಪ್ರವೇಶ ಮಾಡಿ ರೂಮಿನಲ್ಲಿದ್ದ ಟೇಬಲ್ ಡ್ರಾ ಬೀಗ ಹೊಡೆದು ಅದರಲ್ಲಿದ್ದ 1,97,690/. (ಒಂದು ಲಕ್ಷದ ತೊಂಬತ್ತೇಳು ಸಾವಿರದ ಆರು ನೂರ ತೊಂಬತ್ತು ರೂ) ನಗದು ಹಣವನ್ನು ಯಾರೋ ಕಳ್ಳರತು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಈ ವಿಚಾರವನ್ನು ನಮ್ಮ ಟ್ರಸ್ಟ್ ನ ಪದಾಧಿಕಾರಿಗಳವರಿಗೆ ತಿಳಿಸಿ ನಂತರ ಮುಂದಿನ ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಕೆ.ಟಿ.ಜೆ ನಗರ ಪೊಲೀಸ್ ಠಾಣೆ ಗುನ್ನೆ ನಂ :104/2017, ಕಲಂ: 379 ಐ.ಪಿ.ಸಿ.

ದಿ: 22.06.17ರಂದು  ಸಂಜೆ 5.00 ಗಂಟೆಗೆ ಪಿರ್ಯಾದುದಾರರಾದ ಗುರುನಾಥ.ವೈ.ಟಿ. ಬಿನ್ ತಿಪ್ಪೇಸ್ವಾಮಿ. ವೈ, ಉಪ್ಪಾರ ಜನಾಂಗ, ಕೃಷಿ ಕೆಲಸ, ವಾಸ ಗಿಡ್ಡಿನಕಟ್ಟೆ, ಜಗಳೂರು ತಾಲೂಕ್, ದಾವಣಗೆರೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ 14.06.17 ರಂದು ಬೆಳಿಗ್ಗೆ 11.00 ಗಂಟೆಗೆದಾವಣಗೆರೆ ನಗರದ ಗಾಂಧಿ ಸರ್ಕಲ್ ಬಳಿ ಇರುವ ಆಹಾರ್2000 ಹೋಟೆಲ್ ಮುಂಭಾಗ ತಮ್ಮ ಬಾಬ್ತು ಕೆ.ಎ-17-ಇ. ಕ್ಯೂ-7690, ಪ್ಯಾಷನ್ ಫ್ರೋ,  ENG NO: HA10ETFHB23602, CH NO: MBLHA10BJFHB93552, MODEL- 2015, ಬ್ಲಾಕ್ ಕಲರ್ ಬೈಕನ್ನು ಸ್ವಂತ ಕೆಲಸದ ನಿಮಿತ್ತ ನಿಲ್ಲಿಸಿ ಹೋಗಿದ್ದು, ನಂತರ 11.30 ಗಂಟೆಗೆ ವಾಪಸ್ ಬಂದು ನೋಡಲಾಗಿ ಸದರಿ ಮೇಲ್ಕಂಡ ಬೈಕ್ ಇರುವುದಿಲ್ಲ. ಅಲ್ಲಿನ ಅಕ್ಕಪಕ್ಕದವರು ಪರಿಚಯಸ್ಥರ ಬಳಿ ವಿಚಾರಿಸಲಾಗಿ ಸದರಿ ಬೈಕ್ ಪತ್ತೆ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲ. ಆದ್ದರಿಂದ ಸದರಿ ಬೈಕ್ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಿ ಅಂತ ನೀಡಿದ ಲಿಖಿತ ದೂರಿನ ಮೇರೆಗೆ  ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಹರಪನಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂ: 105/2017, ಕಲಂ: 379 ಐ.ಪಿ.ಸಿ.

ದಿ:22-06-2017ರಂದು ಫಿರ್ಯಾಧಿ ಎಂ.ಶಿವಾನಂದ ತಂದೆ ಹನುಮಂತಪ್ಪ. 33ವರ್ಷ.  ಬಾರಿಕರ ಜನಾಂಗ, ವ್ಯವಸಾಯ ಕೆಲಸ,   ವಾಸ ವಾಸ ಮಾಚಿಹಳ್ಳಿ ಗ್ರಾಮ  ಹರಪನಹಳ್ಳಿ ತಾಲ್ಲೂಕ್ ಇವರು ನೀಡಿದ ದೂರಿನ ಸಾರಾಂಶ: ದಿ: 20-06-2017 ರಂದು ಮಂಗಳವಾರ ರಾತ್ರಿ 12-00 ಗಂಟೆಯ ನಂತರ ಮತ್ತು ದಿನಾಂಕ 21-06-2017 ರ ಬುಧವಾರ ಬೆಳಗಿನ ಜಾವದ ಮದ್ಯ ನಮಗೆ ಸೇರಿದ ಮೌಳಿ ಎಮ್ಮಿ (ಮುಂಗರಿಗೋಡು) ಹಾಗು ನಮ್ಮ ಗ್ರಾಮದ ಬಸವರಾಜಪ್ಪ ತಂದೆ ನಾಗಪ್ಪ, ಗೊಲ್ಲರ ಜನಾಂಗ ಇವರಿಗೆ ಸೇರಿದ ಆಕಳು (ಕಂದುಬಣ್ಣದ ವಿ ಆಕಾರದ ಕೋಡು) ಇವುಗಳು ನಾಪತ್ತೆಯಾಗಿರುತ್ತವೆ. ದಿನಾಂಕ 21-06-2017 ರಂದು ಬುದುವಾರ ಬೆಳಿಗ್ಗೆ ನಾವು ನೋಡಿದಾಗ ಈ ಸಂಗತಿ ತಿಳಿದುಬಂದಿರುತ್ತದೆ. ತಕ್ಷಣವೇ ನಾವು ಹಾಗು ನಮ್ಮ ಸ್ನೇಹಿತರು ಕಾರ್ಯಪ್ರವೃತ್ತರಾಗಿ ಸದರಿ ನಮ್ಮ ಕಳೆದು ಹೋದ ಆಕಳು ಎಮ್ಮೆಗಳನ್ನು ಹುಡುಕಿಕೊಂಡು ಹೋದಾಗ ದಿನಾಂಕ 21-06-2017 ರಂದು ಬುಧವಾರ ಅಂದಾಜು ಹಗಲು ಸುಮಾರು 11-30 ರ ಸಮಯದಲ್ಲಿ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯ ದನಗಳ ಸಂತೆ ಮಾರ್ಕೆಟ್ ಆವರಣದಲ್ಲಿ ಸದರಿ ನಮ್ಮ ಕಳೆದು ಹೋದ ಆಕಳು ಮತ್ತು ಎಮ್ಮೆಯನ್ನು ನಾವು ಗುರುತಿಸಿದೆವು. ಅವುಗಳ ಬಗ್ಗೆ ವಿಚಾರಿಸಲಾಗಿ ಸದರಿ ನಮ್ಮ ಎಮ್ಮೆ ಮತ್ತು ಆಕಳನ್ನು ಹಳದಿ ಬಣ್ಣದ ಅಪ್ಪೆ ತ್ರಿಚಕ್ರ ವಾಹನ ಆಟೋ ರಿ.ನಂ ಕೆಎ-17 /ಸಿ 5663 ರಲ್ಲಿ ಯಾರೋ ಇಬ್ಬರು ಸಾಗಿಸಿಕೊಂಡು ಬಂದು ಅಲ್ಲಿ ಮಾರಾಟ ಮಾಡುವುದಕ್ಕೆ ಯೋಜಿಸಿರುವುದಾಗಿ ತಿಳಿದು ಬಂದಿತು. ವಾಹನದ ಹತ್ತಿರ ಹೋಗಿ ವಿಚಾರಿಸಲು ಹೋದಾಗ ಸದರಿ ವಾಹನದ ಚಾಲಕನು ನಾವು ಅವನ ಹತ್ತಿರ ಬರುವುದನ್ನು ನೋಡಿ ತಕ್ಷಣವೇ ಚಾಲಕನು ನಮಗೆ ಸಿಗದೇ ಅವಸರವಾಗಿ ವಾಹನ ಚಾಲನೆ ಮಾಡಿಕೊಂಡು ವೇಗದಿಂದ ತಪ್ಪಿಸಿಕೊಂಡು ಹೋಗಿಬಿಟ್ಟ. ಆತನನ್ನು ಹಿಡಿಯಲು ನಾವು ಪಟ್ಟ ಯತ್ನ ವಿಫಲವಾಗಿರುತ್ತದೆ. ಆದರೆ ಹೋಗುವಾಗ ವಾಹನದ ರಿ.ನಂ ಗುರುತುಹಿಡಿದುಕೊಂಡಿರುತ್ತೇವೆ. ಎಮ್ಮೆಯ ಅಂದಾಜು ಬೆಲೆ 60,000/-ರೂ ಆಗಬಹುದು ಮತ್ತು ಬಸವರಾಜಪ್ಪ ಇವರಿಗೆ ಸೇರಿದ ಆಕಳುವಿನ ಬೆಲೆಸುಮಾರು 40000/- ರೂ ಆಗಬಹುದು. ನಂತರ ಎಮ್ಮೆ ಮತ್ತು ಆಕಳನ್ನು ನಮ್ಮ ಗ್ರಾಮಕ್ಕೆ ತಂದಿರುತ್ತೇವೆ. ನಂತರ ನಾವು ತಿಳಿಯಲಾಗಿ ಆಟೋ ರಿ.ನಂ ಕೆಎ-17 /ಸಿ 5663 ನೇ ಆಟೋ ಮಾಲಿಕ ಚಿರಸ್ತಹಳ್ಳಿಯ ದುರುಗಪ್ಪ ಎಂದು ಮತ್ತು ಅವನ ಜೊತೆಯಲ್ಲಿ ಆತನ ಅಳಿಯ ಹನುಮಂತಪ್ಪ ಹಲುವಾಗಲು ಗ್ರಾಮ ಮತ್ತು ಇತರರು ಸೇರಿ ನಮ್ಮ ಜಾನುವಾರುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ತಿಳಿಯಿತು. ಆದ್ದರಿಂದ ಸದರಿ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ .

ಬಡಾವಣೆ ಪೊಲೀಸ್ ಠಾಣೆ ಗುನ್ನೆ ನಂ: 169/2017, ಕಲಂ: 406, 420, 504, 506 r-w 34 IPC, 38,39 of KARNATAKA MONEY LENDERS ACT 1961 ಮತ್ತು 4 of KARNATAKA PROHIBITION OF CHARGING EXORBITANT INTEREST ACT, 2004.

ದಿನಾಂಕ:22.06.2017 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿ ಶ್ರೀಮತಿ ಸಂಧ್ಯಾ ಕೋಂ ಸ್ಟೀಫನ್, 43 ವರ್ಷ, ಮನೆಗೆಲಸ, ವಾಸ 1589/3, 1ನೇ ಮೇನ್, 17ನೇ ಕ್ರಾಸ್, ವಿನೋಬನಗರ, ದಾವಣಗೆರೆ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರನ್ನು ಪಡೆದು ಪರಿಶೀಲಿಸಲಾಗಿ ಪಿರ್ಯಾದಿ ರವರು ತಮ್ಮ ವಿಳಾಸದಲ್ಲಿ ಹಿಟ್ಟು ರುಬ್ಬುವ ಯಂತ್ರವನ್ನು ಹಾಕಿಕೊಂಡಿದ್ದು ಸದರಿ ಪ್ರಕರಣದ ಆರೋಪಿತಳಾದ ಶ್ರೀಮತಿ ಅನ್ನಪೂರ್ಣಮ್ಮ ಇವರು ಹಿಟ್ಟನ್ನು ರುಬ್ಬಿಸಿಕೊಳ್ಳಲು ಬರುತ್ತಿದ್ದು ಆರೋಪಿತಳು ಪಿರ್ಯಾದುದಾರರ ವಿಶ್ವಾಸವನ್ನು ಗಳಿಸಿಕೊಂಡು ಯಾವಾಗಲಾದರೂ ತುರ್ತು ಹಣದ ಅಗತ್ಯವಿದ್ದಲ್ಲಿ ಬಡ್ಡಿ ಹಣ ಮುಂಗಡ ಮುರಿದು ದಿನ ಕಂತು ಫಿಕ್ಸ್ ಮಾಡಿ ಹಣ ಕೊಡುವುದಾಗಿ ತರೆಯವರಿಗೆ ಬಡ್ಡಿಯ ಲೇವಾದೇವಿ ವಿಷಯವನ್ನು ತಿಳಿಸಕೂಡದು ಎಂದು ತಿಳಿಸಿದ್ದು ಪಿರ್ಯಾದುದಾರರು ತಮಗೆ ಹಣದ ಅವಶ್ಯಕತೆ ಇದ್ದುದರಿಂದ ದಿನಾಂಕ:03.09.2014 ರಿಂದ ದಿನಾಂಕ:25.02.2017 ರವರೆಗೆ ಆಗಾಗ್ಗೆ ಹಣವನ್ನು ರೂ 4% ಗಿಂತಲೂ ಹೆಚ್ಚಿನ ಬಡ್ಡಿ ಹಣದ ರೂಪದಲ್ಲಿ ಒಟ್ಟು ರೂ 1.50.000/- ಗಳನ್ನು ಪಡೆದು ಸಾಲದ ಹಣದ ಶ್ಯೂರಿಟಿಗಾಗಿ ಪಿರ್ಯಾದುದಾರರ ಗಂಡನ ಹೆಸರಿನ ರವರ ಸಹಿಯಿರುವ ಕರೂರು ವೈಶ್ಯ ಬ್ಯಾಂಕ್.ಲಿ ನ ಅವರ ಸಹಿಯಿರುವ ಖಾಲಿ ಚೆಕ್ ನಂ 595259 ಅನ್ನು ನೀಡಿ ಪ್ರತಿ ದಿನ ಕನಿಷ್ಟ ರೂ 1,200/- ರಂತೆ ಹಣವನ್ನು ನೀಡಿ ಸಾಲವನ್ನು ತೀರಿಸಿರುತ್ತದೆ. ನಂತರ ಸದರಿ ಆರೋಪಿತಳ ಬಳಿ ಪಿರ್ಯಾದಿ ಹಾಗೂ ಅವರ ಗಂಡ ಇಬ್ಬರೂ ಹೋಗಿ ಸಾಲದ ಹಣದ ಭದ್ರತೆಗಾಗಿ ನೀಡಿದ್ದ ಚೆಕ್ ಅನ್ನು ವಾಪಸ್ಸು ಕೇಳಿದ್ದು ಅದಕ್ಕೆ ಆರೋಪಿತಳು ಇಂದು ನಾಳೆ ಕೊಡುವುದಾಗಿ ಹೇಳಿ ಕಳುಹಿಸುತ್ತಿದ್ದು ಇಲ್ಲಿಯವರೆಗೂ ಆರೋಪಿತಳು ಚೆಕ್ ಅನ್ನು ವಾಪಸ್ಸು ನೀಡದೆ ಆರೋಪಿತಳು ತನ್ನ ಮಗ ಸಂದೀಪ ಈತನ ಮೂಲಕ ರೂ 9.60.000/- ಕ್ಕೆ ಅಕ್ರಮ ಹಣವನ್ನು ಭರ್ತಿ ಮಾಡಿ ಬೆಂಗಳೂರು ವೈಟ್ ಫೀಲ್ಡ್ ನಲ್ಲಿರುವ SBI ಬ್ಯಾಂಕಿನಲ್ಲಿ ಕಲೆಕ್ಷನ್ ಗೆ ಹಾಕಿ ನಂತರ ವಕೀಲರ ಮೂಲಕ ನೋಟೀಸ್ ನೀಡಿದಾಗಲೇ ವಿಷಯ ಗೊತ್ತಾಗಿ ಪಿರ್ಯಾದುದಾರರ ಗಂಡ ದಿನಾಂಕ:16.06.2017 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಆರೋಪಿತಳ ಮನೆಗೆ ಹೋಗಿ ವಿಷಯವನ್ನು ತಿಳಿಸಿ ಚೆಕ ಬಗ್ಗೆ ವಿಚಾರ ಮಾಡಲಾಗಿ ಆರೋಪಿತಳು ತನ್ನ ಮಗಳು ಜೀವಿತಾ ಇವಳೊಂದಿಗೆ ಸೇರಿಕೊಂಡು ಅವಾಚ್ಯ ಶಬ್ದಗಲಿಂದ ಬೈದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆಂದು ಸದರಿಯವರುಗಳ ಮೇಲೆ ಕಾನೂನು ಕ್ರಮಕ್ಕೆ ಇದ್ದ ದೂರಿನ ಮೇರೆಗೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಅರಸೀಕೆರೆ ಪೊಲೀಸ್ ಠಾಣೆ ಯು.ಡಿ.ಆರ್ ನಂ :12/2017, ಕಲಂ: 174 ಸಿ.ಆರ್.ಪಿ.ಸಿ.

ದಿನಾಂಕ:22-06-2017 ರಂದು ಬೆಳಿಗ್ಗೆ 10-15 ಗಂಟೆಗೆ ಪಿರ್ಯಾದಿ ಪತಿನಾಯ್ಕ ತಂದೆ ಬೋಜನಾಯ್ಕ, ವಾಸ: ಗುಳೇದಹಟ್ಟಿ ತಾಂಡ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಮಗನಾದ ಮೃತ ತಿಪ್ಪಿಶಿ ಎಸ್.ಎಸ್.ಎಲ್.ಸಿ ಓದುತ್ತಿದ್ದವನು ಬಿಟ್ಟು ಬೆಂಗಳೂರಿಗೆ ದುಡಿಮೆ ಮಾಡಲು ಹೋಗುತ್ತೇನೆಂದು ಹೋಗಿದ್ದ ಬೆಂಗಳೂರಿನಿಂದ ಆತನನ್ನು ವಾಪಸ್ಸು ಮನೆಗೆ ಕರೆದುಕೊಂಡು ಬಂದಿದ್ದು, ಇನ್ನುಮುಂದೆ ನಾನು ನಿಮ್ಮೊಂದಿಗೆ ವ್ಯವಸಾಯಕೆಲಸ ಮಾಡಿಕೊಂಡು ಊರಿನಲ್ಲಿ ಇರುತ್ತೇನೆಂದು ಹೇಳಿದವನು ಆತನ ಮನಸ್ಸಿನಲ್ಲಿ ಯಾವ ಯೋಚನೆ ಬಂತೋ ಗೊತ್ತಿಲ್ಲ ಪುನ: ನಾನು ಓದಲು ಹೋಗುತ್ತೇನೆಂದು ಹೇಳಿದ ಅದಕ್ಕೆ ಪಿರ್ಯಾದಿ ಸಾಲ ಮಾಡಿದ್ದೇವೆ ನೀನು ಶಾಲೆ ಬಿಟ್ಟು ಬಹಳ ದಿನವಾಗಿದೆ ಸುಮ್ಮನೆ ನಮ್ಮೊಂದಿಗೆ ಕೆಲಸ ಮಾಡಿಕೊಂಡು ಇರು ಅಂತ ತಿಳಿಸಿದರು. ಆಗ ಮೃತ ತಿಪ್ಪೇಶಿ ನನ್ನಿಂದ ಓದಲು ಆಗುತ್ತಿಲ್ಲವೆಂದು ಬೇಸರ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:20-06-2017 ರಂದು ಬೆಳಿಗ್ಗೆ 07-00 ಗಂಟೆಗೆ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿಕೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ದಾವಣಗೆರೆ ಎಸ್.ಎಸ್.ಐಟೆಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿ:22-06-2017 ರಂದು 01-45 ಎ.ಎಂ ಗಂಟೆಗೆ ಮೃತಪಟ್ಟಿರುತ್ತಾನೆ. ಮೃತನ ಸಾವು ಆಕಸ್ಮಿಕ ಘಟನೆಯಾಗಿದ್ದು, ಅವನ ಸಾವಿಗೆ ಅವನೇ ಕಾರಣನಾಗಿರುತ್ತಾನೆ. ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

 

Thursday, June 22, 2017

DVG DCR ON 22-06-2017

ದಿ:22-06-2017 ರಂದು ದಾವಣಗೆರೆ ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ವಿವರ.

ಬಡಾವಣೆ ಪೊಲೀಸ್ ಠಾಣೆ ಗುನ್ನೆ ನಂ: 168/2017, ಕಲಂ: 379 ಐ.ಪಿ.ಸಿ.

ದಿ:21/06/2017ರಂದು 13:00 ಗಂಟೆಗೆ ಫಿರ್ಯಾದಿ ಮಲ್ಲಮ್ಮ ಕೋಂ  ತಿಪ್ಪೇಸ್ವಾಮಿ.ಎಂ.ಲೇಟ್, 70 ವರ್ಷ, ಗೃಹಿಣಿ ವಾಸ #544, 1ನೇ ಮೇನ್, 1ನೇ  ಕ್ರಾಸ್, ಗಣಪತಿ ದೇವಸ್ಥಾನದ ಹತ್ತಿರ, ಗಿರಿನಗರ, ಕ್ಯಾತ್ಸಂದ್ರ (ಪೋಸ್ಟ್) ತುಮಕೂರು ನಗರ ಇವರು ಠಾಣೆಗೆ ಹಾಜರಾಗಿ  ದೂರಿನ ಸಾರಾಂಶ ನಾನು ದಿ:17/05/2017 ರಂದು ನಾನು ತುಮಕೂರಿನಿಂದ ಹಿರಿಯೂರು ನಗರಕ್ಕೆ ಬಂದು ದಿ:18/05/2017 ರಂದು ಮದುವೆಯಲ್ಲಿ ಪಾಲ್ಗೊಂಡಿರುತ್ತೇನೆ. ನಂತರ ಮದುವೆ ಮುಗಿಸಿಕೊಂಡು ದಾವಣಗೆರೆ ನಗರದ ಎಂ.ಸಿ.ಸಿ. ಬ್ಲಾಕ್, 8ನೇ ಮೇನ್, 8ನೇ ಕ್ರಾಸ್, #2515, ರಲ್ಲಿ ವಾಸವಾಗಿರುವ ನನ್ನ ಕಿರಿಯ ಮಗಳಾದ ಮಂಜುಳಾ ಕೋಂ ಮಲ್ಲಲಿಕಾರ್ಜುನ.ಡಿ.ಎಸ್. ರವರ ಮನೆಗೆ ಹೋಗಲು ಮಧ್ಯಾಹ್ನ ಸುಮಾರು 01:00 ಗಂಟೆಗೆ ಹಿರಿಯೂರು ನಗರದಿಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸಿ ದಾವಣಗೆರೆಗೆ ಸುಮಾರು ಮಧ್ಯಾಹ್ನ 03:00 ಗಂಟೆಗೆ ಬಂದು ತಲುಪಿ ಆಟೋ ರಿಕ್ಷಾದಲ್ಲಿ ನನ್ನ ಮಗಳ ಮನೆ ತಲುಪಿ ಮನೆಯಲ್ಲಿ ನನ್ನ ಬಾಬ್ತು ಲೆದರ ಬ್ಯಾಗ್ ತೆಗೆದು ಅದರಲ್ಲಿ ನನ್ನ ಬಾಬ್ತು ಸುಮಾರು 50 ಗ್ರಾಂ ತೂಕದ ಬಂಗಾರದ ಹವಳ, ಮುತ್ತು & ಪಚ್ಚೆ ಇರುವ ಸರ, ಹಾಗು 8 ಗ್ರಾಂ ತೂಕದ ಬಂಗಾರದ ಮಾಟೀಲು ಹಾಗು 10 ಗ್ರಾಂ ತೂಕದ ಬಂಗಾರದ ಗಟ್ಟಿಯನ್ನು ಹಾಗು ರೂ900/- ನಗದುವುಳ್ಳ  ಪರ್ಸ್  ಇಟ್ಟಿದ್ದನ್ನು ನೋಡಲಾಗಿ ಕಾಣಿಸದೇ ಇದ್ದು ನನ್ನ ಲೆದರ ಬ್ಯಾಗಿನಲ್ಲಿ ಹುಡುಕಾಡಲಾಗ ಸಿಕ್ಕಿರುವುದಿಲ್ಲ. ನಾನು ಬಸ್ಸಿನಲ್ಲಿ ಹಿರಿಯೂರಿನಿಂದ ದಾವಣಗೆರೆ ಪ್ರಯಾಣಿಸುವಾಗ ನಾನು ಧರಿಸಿದ್ದ 50 ಗ್ರಾಂ ತೂಕದ ಬಂಗಾರದ ಎರಡು ಎಳೆ ಹವಳದ ಸರವನ್ನುಹಿರಿಯೂರು-ಚಿತ್ರದುರ್ಗದ ಮಧ್ಯೆ ಸ್ವಲ್ಪ ಸೆಕೆಯಾಗಿದ್ದರಿಂದ ಅದನ್ನು ಬಸ್ಸಿನಲ್ಲಿಯೇ ಬಿಚ್ಚಿ ನನ್ನ ಪರ್ಸ್ ನಲ್ಲಿಟ್ಟು ಅದನ್ನು ನನ್ನ ಲೆದರ ಬ್ಯಾಗಿನಲ್ಲಿಟ್ಟುಕೊಂಡಿರುತ್ತೇನೆ. ನಂತರ ಚಿತ್ರದುರ್ಗ  ದಾಟಿದ ನಂತರ ನನ್ನ ಮುಂದಿನ ಮೂರು ಜನರು ಕುಳಿತುಕೊಳ್ಳುವ  ಸೀಟ್ ಖಾಲಿಯಾಗಿದ್ದರಿಂದ ಸದರಿ ಸೀಟಿಗೆ ಹೋಗಿ ಕುಳಿತುಕೊಂಡಿದ್ದು ಆಗ ನನ್ನ ಪಕ್ಕದಲ್ಲಿ ಸುಮಾರು 03 ತಿಂಗಳ ಮಗು ಎತ್ತಿಕೊಂಡಿದ್ದ ಸುಮಾರು 25 ವರ್ಷ ವಯಸ್ಸಿನ ಮಹಿಳೆ ಹಾಗು ಅವರ ಪಕ್ಕದ್ದಲ್ಲಿ ಸುಮಾರು 35ವರ್ಷ ವಯಸ್ಸಿನ ಮಹಿಳೆ ಕುಳಿತುಕೊಂಡು ದಾವಣಗೆರೆಗೆ ನನ್ನೊಂದಿಗೆ ಪ್ರಯಾಣಿಸಿರುತ್ತಾರೆ. ನಾನು ಚಿತ್ರದುರ್ಗದಿಂದ ದಾವಣಗೆರೆಗೆ ಪ್ರಯಾಣಿಸುವಾಗ ನನ್ನ ಪರ್ಸ್ ಇಟ್ಟಿದ್ದ ಲೆದರ ಬ್ಯಾಗನ್ನು ನನ್ನ ಕಾಲಿನ ಬಳಿ ಇಟ್ಟುಕೊಂಡಿದ್ದು ಆಗ ನನ್ನ ಪಕ್ಕದಲ್ಲಿ ಮಗು ಎತ್ತಿಕೊಂಡು ಕುಳಿತಿದ್ದ ಮಹಿಳೆ ತನ್ನ ಬ್ಯಾಗಿನಲ್ಲಿಟ್ಟಿದ್ದ ಬಟ್ಟೆಗಳು ಕೆಳಗೆ ಬಿದ್ದಿದ್ದು ಅವುಗಳನ್ನು ಎತ್ತಿಕೊಳ್ಳುವ ನೆಪವೊಡ್ಡಿ ತನ್ನ ಮಗುವನ್ನು ನನಗೆ ಎತ್ತಿಕೊಳ್ಳಲು ಕೊಟ್ಟು ಮಗುವಿನ ತಲೆ ಜೋಪಾನ ಅಂತ ತಿಳಿಸಿ ಕೆಳಗೆ ಬಗ್ಗಿ ಬಟ್ಟೆ ಎತ್ತಿಕೊಂಡಿರುತ್ತಾಳೆಸದರಿ ಮೂರು ತಿಂಗಳ ಮಗು ಎತ್ತಿಕೊಂಡಿದ್ದ ಮಹಿಳೆ ನಾನು ಬಸ್ಸಿನಲ್ಲಿ ಹಿರಿಯೂರಿನಿಂದ ದಾವಣಗೆರೆಗೆ ಪ್ರಯಾಣಿಸುವಾಗ ಚಿತ್ರದುರ್ಗ-ದಾವಣಗೆರೆ ಮಧ್ಯೆ  ನನ್ನ ಬಾಬ್ತು ಲೆದರ ಬ್ಯಾಗಿನಲ್ಲಿಟ್ಟಿದ್ದ ನನ್ನ ಒಟ್ಟು 68 ಗ್ರಾಂ ತೂಕದ ಬಂಗಾರದ ಒಡವೆಗಳನ್ನು  ಹಾಗು ರೂ900/- ನಗದು ಹಣವನ್ನು ಹೊಂದಿದ್ದ ಪರ್ಸ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳ್ಳತನವಾಗಿರುವ 1)ಸುಮಾರು 50 ಗ್ರಾಂ ತೂಕದ ಬಂಗಾರದ ಹವಳ, ಮುತ್ತು & ಪಚ್ಚೆ ಇರುವ ಸರ, ಅಂದಾಜು ಮೌಲ್ಯ 1,25,000/- 2)ಸುಮಾರು 8 ಗ್ರಾಂ ತೂಕದ ಬಂಗಾರದ ಮಾಟೀಲು ಅಂದಾಜು ಮೌಲ್ಯ ರೂ17,000/- ಹಾಗು 3)10 ಗ್ರಾಂ ತೂಕದ ಬಂಗಾರದ ಗಟ್ಟಿ ಅಂದಾಜು ಮೌಲ್ಯ ರೂ25,000/- 4)ರೂ900/-  ಎಲ್ಲಾ ಸೇರಿ ಒಟ್ಟು ಸುಮಾರು 68 ಗ್ರಾಂ ತೂಕದ ಬಂಗಾರದ ಒಡವೆಗಳು  ಹಾಗು ಅಂದಾಜು ಒಟ್ಟು ಮೌಲ್ಯ ರೂ1,67,900/-ಗಳಾಗುತ್ತದೆ. ಪತ್ತೆಮಾಡಿ ಕೊಡಲು ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ದಾವಣಗೆರೆ ಡಿ.ಸಿ.ಬಿ ಪೊಲೀಸ್ ಠಾಣೆ ಗುನ್ನೆ ನಂ: 54/2017, ಕಲಂ :32 (3) ಕೆ.ಇ.ಆಕ್ಟ.


ದಿನಾಂಕ 21-06-2017ರಂದು  ಮಧ್ಯಾಹ್ನ 01-30 ಪಿಎಂಗೆ  ಸಿಹೆಚ್ ಸಿ- 106 ಈಶ್ವರಪ್ಪ ಇವರು ನೀಡಿದ ದೂರನ್ನು ಸ್ವೀಕರಿಸಿ ನೋಡಲಾಗಿ ಪಿರ್ಯಾದಿ ಪಿಸಿ 02 ಮಂಜುನಾಥ ಇವರೊಂದಿಗೆ ಬೆಳಿಗ್ಗೆ 10-00 ಗಂಟೆಗೆ ಎಸ್.ಜೆ.ಎಂ.ನಗರದಲ್ಲಿ  ಗಸ್ತು ಮಾಡುತ್ತಿರುವಾಗ. ಎಸ್.ಜೆ.ಎಂ.ನಗರ 2ನೇ ಮೇನ್ 01 ನೇ ಕ್ರಾಸ್ ದೋಸೆ ನಾಗರಾಜಪ್ಪ ಇವರ ಎಗ್ ರೈಸ್ ಅಂಗಡಿಯ ಮುಂಭಾಗ  ಸಾರ್ವಜನಿಕರಿಗೆ  ಅಕ್ರಮವಾಗಿ ಮಧ್ಯ ಸೇವನೆಗೆ ಅವಕಾಶ ಮಾಡಿ ಕೊಟ್ಟಿರುತ್ತಾರೆ. ಅಂತಾ ಬಂದ ಮಾಹಿತಿ ಮೇರೆಗೆ ಪಂಚರುರೊಂದಿಗೆ ಸದರಿ ಸ್ಥಳಕ್ಕೆ ಹೋಗಿ ಅಕ್ರಮವಾಗಿ ಮಧ್ಯ ಸೇವೆಗೆ ಅವಕಾಶ ಮಾಡಿಕೊಟ್ಟಿದ್ದ ಆರೋಪಿಯಾದ ದೋಸೆ ನಾಗರಾಜಪ್ಪ ತಂದೆ ಬಸವರಾಜಪ್ಪ ಇವರ ಎಗ್ ರೈಸ್ ಅಂಗಡಿಯ ಮುಂಭಾಗ  ದಾಳಿ ಮಾಡಿ ಪಂಚರ ಸಮಕ್ಷಮ ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ 90 .ಎಂ.ಎಲ್. ಬೆಂಗಳೂರು ಮಾಲ್ಟ್  ವಿಸ್ಕಿ ಕಂಪನಿಯ 23 ಮದ್ಯದ ಪೌಚ್ ಗಳು, 03 ಖಾಲಿ  ಪೌಚ್ 04 ಖಾಲಿ ಪ್ಲಾಸ್ಟಿಕ್ ಲೋಟಗಳು ಇವುಗಳ ಒಟ್ಟು ಬೆಲೆ 552/- ರೂಗಳಾಗಿದ್ದು  ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮಾಡಿ  ಅಮಾನತ್ತು ಪಡಿಸಿಕೊಂಡಿರುತ್ತೆ. ಮೇಲ್ಕಂಡ ಆರೋಪಿಯ ವಿರುದ್ದ ಪ್ರಕರಣ ದಾಖಲಿಸುವಂತೆ ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.